Tuesday, October 4, 2011

ಫೇಸ್ ಬುಕ್ ಖಾತೆ ರಕ್ಷಣೆ

ಇತ್ತೀಚಿಗೆ ಬಹಳ ಜನಪ್ರಿಯತೆ ಪಡೆದಿರುವ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಹಲವು ಲಿಂಕ್ ಗಳು ವೈರಸ್ ಪೂರಿತವಾಗಿರುತ್ತವೆ.ಕಿಡಿಗೇಡಿಗಳು ಕೆಲವು ಸಂದೇಶಗಳನ್ನು ಸೃಷ್ಟಿಸಿ ವೈರಸ್ ಯುಕ್ತ ಲಿಂಕ್ ಗಳನ್ನು ಸೇರಿಸಿ ಫೇಸ್ ಬುಕ್ ನಲ್ಲಿ ಹರಿಬಿಡುತ್ತಾರೆ.ಇಂತಹ ಲಿಂಕ್ ಗಳನ್ನು ನೀವು ಕ್ಲಿಕ್ ಮಾಡುವುದರಿಂದ ನಿಮ್ಮ ಫೇಸ್ ಬುಕ್ ಖಾತೆ ತೊಂದರೆಗೊಳಗಾಗಬಹುದು.ಇದನ್ನು ತಪ್ಪಿಸಲು ಇರುವ ಒಂದು ಉತ್ತಮ ಅಪ್ಲಿಕೇಶನ್ Bitdefender Safego .ಈ ಅಪ್ಲಿಕೇಶನ್ ಅನ್ನು ನಿಮ್ಮ ಫೇಸ್ ಬುಕ್ ಖಾತೆಗೆ ಅಳವಡಿಸಿಕೊಳ್ಳುವುದರಿಂದ ನಿಮ್ಮ ಫೇಸ್ ಬುಕ್ ಖಾತೆಯನ್ನು ವೈರಸ್ ಯುಕ್ತ ಲಿಂಕ್ ಗಳಿಂದ ಸಂರಕ್ಷಿಸಿಕೊಳ್ಳಬಹುದು.


*
Bitdefender Safego ಅಪ್ಲಿಕೇಶನ್ ಅನ್ನು ನಿಮ್ಮ ಖಾತೆಗೆ ಅಳವಡಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

No comments:

Post a Comment