Friday, August 12, 2011

Dictionary

.ಗೂಗಲ್ ನವರ ಪ್ರಸಿದ್ದ 'Google Dictionary' ಇತ್ತೀಚೆಗೆ ಅಲಭ್ಯವಾಗಿದೆ.Google ನವರು ಈ ಸರ್ವಿಸ್ ಅನ್ನು ನಿಲ್ಲಿಸಿದ್ದಾರೆ.'Google Dictionary' ಒಂದು ಉಪಯುಕ್ತ ಸೇವೆಯನ್ನು ಒದಗಿಸುತ್ತಿತ್ತು.ನಮಗೆ ಬೇಕಾದ ಇಂಗ್ಲಿಷ್ ಪದಕ್ಕೆ ಹಲವಾರು ಭಾಷೆಗಳ ಅರ್ಥವನ್ನು ಇದು ಒದಗಿಸುತ್ತಿತ್ತು.ಆದರಿಂದ ಈ ಸೇವೆಯನ್ನು ಸ್ಥಗಿತಗೊಳಿಸಿದ್ದು ಬಹಳಷ್ಟು ಜನರಿಗೆ ಭೇಸರವನ್ನುಂಟುಮಾಡಿದೆ


.Google ನವರು 'web search ' ಉಪಯೋಗಿಸಿ ಪದಗಳ ಅರ್ಥ ಕಂಡುಹಿಡಿಯುವ ಸೌಲಭ್ಯ ಮಾಡಿಕೊಟ್ಟಿದ್ದಾರೆ
ನಿಮಗೆ ಬೇಕಾದ ಪದದ ಅರ್ಥ ಹುಡುಕಬೇಕೆಂದರೆ ವೆಬ್ ಸರ್ಚ್ ನಲ್ಲಿ 'define world ' ಕೊಟ್ಟರೆ ನಿಮಗೆ ಪದದ ಅರ್ಥ ದೊರೆಯುತ್ತದೆ .ಉದಾಹರಣೆಗೆ ನಿಮಗೆ looking ಎಂಬ ಪದದ ಅರ್ಥ ಬೇಕಾದರೆ ವೆಬ್ ಸರ್ಚ್ ನಲ್ಲಿ 'define looking ' ಎಂದು ಸರ್ಚ್ ಮಾಡಬೇಕು

*ನಿಮಗೆ ಅಂತರ್ಜಾಲದಲ್ಲಿ ಸುಲಭ dictionary ಯ ತಾಣ dictionary .com
dictionary .com ಗಾಗಿ ಇಲ್ಲಿ ಕ್ಲಿಕ್ ಮಾಡಿ

Thursday, August 11, 2011

ಗಣಕದ ಸೀರಿಯಲ್ ನಂಬರ್

ನಿಮ್ಮ ಗಣಕ ತೊಂದರೆ ಕೊಟ್ಟಾಗ ನೀವು ಸಹಾಯಕ್ಕಾಗಿ technical support team ಗೆ ಕರೆ ಮಾಡಿದಾಗ ಅವರು ನಿಮಗೆ ಕೇಳುವುದು ನಿಮ್ಮ ಗಣಕದ ಸೀರಿಯಲ್ ನಂಬರ್ .ನೀವು ಲ್ಯಾಪ್ಟಾಪ್ ಅನ್ನು ಉಪಯೋಗಿಸುವವರಾದರೆ ನಿಮ್ಮ ಲ್ಯಾಪ್ಟಾಪ್ ನ ಹಿಂಬಾಗದಲ್ಲಿ ಅದರ ಸೀರಿಯಲ್ ನಂಬರ್ ಅನ್ನು ಬರೆದಿರುತ್ತಾರೆ.ಆದರೆ ಹಲವಾರು desktop ಗಳಲ್ಲಿ ಈ ಸೀರಿಯಲ್ ನಂಬರ್ ಹುಡುಕುವುದು ದೊಡ್ಡ ಸಮಸ್ಯೆ .ಹಾಗಾಗಿ ನಿಮ್ಮ ಗಣಕದ ಸೀರಿಯಲ್ ನಂಬರ್ ತಿಳಿಯಲು ಇಲ್ಲಿದೆ ಒಂದು ಸುಲಭ ವಿಧಾನ
(windows ಉಪಯೋಗಿಸುವವರಿಗೆ ಮಾತ್ರ ಈ ವಿಧಾನ)


go to

.start -run type cmd
.ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಈ ಕೆಳಕಂಡಂತೆ ಟೈಪ್ ಮಾಡಿ
wmic bios get serialnumber

ನಿಮ್ಮ ಗಣಕದ ಸೀರಿಯಲ್ ನಂಬರ್ ಹಾಗು ಮಾಡೆಲ್ ತಿಳಿಯಲು
.start -run type cmd
.ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಈ ಕೆಳಕಂಡಂತೆ ಟೈಪ್ ಮಾಡಿ
wmic csproduct get name, identifyingnumber


ಈ ಮೂಲಕ ನೀವು ಸುಲಭವಾಗಿ ಗಣಕದ ಸೀರಿಯಲ್ ನಂಬರ್ ಹಾಗು ಮಾಡೆಲ್ ಅನ್ನು ತಿಳಿಯಬಹುದು