Thursday, November 8, 2012

GMAIL SMS

ಗೂಗಲ್ ಇತ್ತೀಚಿಗೆ ತನ್ನ ಹೊಸ ಉಚಿತ SMS ಸೇವೆಯನ್ನು ಪ್ರಾರಂಭಿಸಿದೆ.  ಗೂಗಲ್‍ನ Gmail ಖಾತೆ ಹೊಂದಿರುವ ಎಲ್ಲಾ ಭಾರತೀಯರು ಈ ಸೌಲಭ್ಯವನ್ನು ಉಪಯೋಗಿಸಬಹುದಾಗಿದೆ.  ಒಂದು ಖಾತೆಯಿಂದ ದಿನಕ್ಕೆ ೫೦ ಉಚಿತ SMSಗಳನ್ನು ಕಳುಹಿಸಬಹುದು. ನೀವು ಕಳುಹಿಸಿದ SMSಗಳಿಗೆ REPLY ಬಂದಾಗ 5 SMSಗಳು ನಿಮ್ಮ ಖಾತೆಗೆ ಜಮೆಯಾಗುತ್ತದೆ (ಗರಿಷ್ಠ ಮಿತಿ ೫೦ SMS).

ನೀವು SMS ಕಳುಹಿಸಬೇಕಾದ ವ್ಯಕ್ತಿಯ ಇ-ಮೈಲ್ ಐಡಿಗೆ ಮೊಬೈಲ್ ನಂಬರನ್ನು ಜೋಡಿಸಿದ ನಂತರ ಆ ವ್ಯಕ್ತಿಗೆ SMS ಮಾಡಲು ಅವಕಾಶ ನೀಡಲಾಗುತ್ತದೆ.



 





ಹೆಚ್ಚಿನ Settings /ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ.

Tuesday, March 27, 2012

ಗೂಗಲ್ ಪ್ಲೇ - ಆಂಡ್ರೋಯ್ಡ್ apps ಗಳ ಹೊಸ ಜಾಲತಾಣ.

ನೀವು Android ಮೊಬೈಲ್ ಅನ್ನು ಬಳಸುತ್ತಿದ್ದೀರಾ? ಹಾಗಿದಲ್ಲಿ ನಿಮಗೆ ಬೇಕಾದ Apps ಗಳಿಗಾಗಿ ಬಹಳಷ್ಟು ಹುಡುಕಾಟ ನಡೆಸಿರುತ್ತೀರಿ.  Android ನ ಪೋಷಕ ಕಂಪನಿ ಗೂಗಲ್ ಮಾರ್ಚ್  ೨೭ ರಂದು ತನ್ನ ಹೊಸ GOOGLE PLAY  ಜಾಲತಾಣವನ್ನು ಅನಾವರಣಗೊಳಿಸಿದೆ. ನಿಮ್ಮ Android ಫೋನ್ ಗೆ ಬೇಕಾದ ಎಲ್ಲಾ apps ಗಳನ್ನೂ ಇದರಲ್ಲಿ ಕೂಡಿಡುವ ಉತ್ತಮವಾದ ಪ್ರಯತ್ನವನ್ನು ಗೂಗಲ್ ಮಾಡಿದೆ. 




* ಗೂಗಲ್ ಪ್ಲೇ ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರ ಕೃಪೆ: google.com

Sunday, March 18, 2012

ವಿಂಡೋಸ್ App Development Challenge

ಮೈಕ್ರೋಸಾಫ್ಟ್ ತನ್ನ ಹೊಸ ಮೊಬೈಲ್ Operating System  ವಿಂಡೋಸ್ ಫೋನ್ 7.5 / Mango ಪ್ರಚಾರಕ್ಕಾಗಿ ಹೊಸ ಸ್ಪರ್ಧೆಯನ್ನು ಏರ್ಪಡಿಸಿದೆ. Windows Phone ಗೆ ೩ ಅಪ್ಲಿಕೇಷನ್ ಅನ್ನು ತಯಾರಿಸಿ ನೀಡಿದಲ್ಲಿ ೧ Windows Phone ಅನ್ನು ಗೆಲ್ಲುವ ಅವಕಾಶ ನಿಮ್ಮದಾಗಿದೆ. ಇದರ registration ವೆಚ್ಚ ೫೦೦೦ ರೂ ಗಳು. ನಿಮಗೆ ಬೇಕಾಗುವ ಎಲ್ಲಾ ತಂತ್ರಾಂಶಗಳನ್ನು ಮೈಕ್ರೋಸಾಫ್ಟ್ ನಿಮಗೆ ನೀಡುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ. 


**ಈ ಸ್ಪರ್ದೆಯು ೨೦೧೨ March ೩   ರ ತನಕ ಚಾಲ್ತಿಯಲ್ಲಿರುತ್ತದೆ.  

Tuesday, October 4, 2011

ImgBurn

CD,DVD ಗಳ ಇಮೇಜ್ ಕಾಫಿ , ರೈಟ್ ಮಾಡಲು ಹೆಚ್ಚಿನ ಜನರು Nero ತಂತ್ರಾಂಶವನ್ನು ಉಪಯೋಗಿಸುತ್ತಾರೆ.ಇದು ನಿಮ್ಮ ಗಣಕದಲ್ಲಿ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ.ಈ ಸಮಸ್ಯೆಗೆ ಪರಿಹಾರ ImgBurn ತಂತ್ರಾಂಶ.CD,DVD ಗಳ ಇಮೇಜ್ ತೆಗೆದು ಕಾಫಿ ಹಾಗು ರೈಟ್ ಮಾಡಲು ಇದು ಅತ್ಯಂತ ಸುಲಭ ತಂತ್ರಾಂಶ

*ImgBurn ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಫೇಸ್ ಬುಕ್ ಖಾತೆ ರಕ್ಷಣೆ

ಇತ್ತೀಚಿಗೆ ಬಹಳ ಜನಪ್ರಿಯತೆ ಪಡೆದಿರುವ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಹಲವು ಲಿಂಕ್ ಗಳು ವೈರಸ್ ಪೂರಿತವಾಗಿರುತ್ತವೆ.ಕಿಡಿಗೇಡಿಗಳು ಕೆಲವು ಸಂದೇಶಗಳನ್ನು ಸೃಷ್ಟಿಸಿ ವೈರಸ್ ಯುಕ್ತ ಲಿಂಕ್ ಗಳನ್ನು ಸೇರಿಸಿ ಫೇಸ್ ಬುಕ್ ನಲ್ಲಿ ಹರಿಬಿಡುತ್ತಾರೆ.ಇಂತಹ ಲಿಂಕ್ ಗಳನ್ನು ನೀವು ಕ್ಲಿಕ್ ಮಾಡುವುದರಿಂದ ನಿಮ್ಮ ಫೇಸ್ ಬುಕ್ ಖಾತೆ ತೊಂದರೆಗೊಳಗಾಗಬಹುದು.ಇದನ್ನು ತಪ್ಪಿಸಲು ಇರುವ ಒಂದು ಉತ್ತಮ ಅಪ್ಲಿಕೇಶನ್ Bitdefender Safego .ಈ ಅಪ್ಲಿಕೇಶನ್ ಅನ್ನು ನಿಮ್ಮ ಫೇಸ್ ಬುಕ್ ಖಾತೆಗೆ ಅಳವಡಿಸಿಕೊಳ್ಳುವುದರಿಂದ ನಿಮ್ಮ ಫೇಸ್ ಬುಕ್ ಖಾತೆಯನ್ನು ವೈರಸ್ ಯುಕ್ತ ಲಿಂಕ್ ಗಳಿಂದ ಸಂರಕ್ಷಿಸಿಕೊಳ್ಳಬಹುದು.


*
Bitdefender Safego ಅಪ್ಲಿಕೇಶನ್ ಅನ್ನು ನಿಮ್ಮ ಖಾತೆಗೆ ಅಳವಡಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ