Tuesday, March 29, 2011

Autorun Prevent

Autorun ಹೆಸರೇ ಹೇಳುವಂತೆ ನಿಮ್ಮ ಗಣಕಕ್ಕೆ ನೀವು ಪೆನ್ ಡ್ರೈವ್,external ಹಾರ್ಡ್ ಡಿಸ್ಕ್,cd ಗಳನ್ನು connect ಮಾಡಿದ್ದಾಗ ಈ autorun ತಂತ್ರಾಶ ತನ್ನಷ್ಟಕ್ಕೆ ತಾನೇ ರನ್ ಆಗುವುದು.ಕೆಲವೊಮ್ಮೆ ಈ ತರಹದ external ಡ್ರೈವ್ ಗಳು ವೈರಸ್ ನಿಂದ ತೊಂದರೆಗೊಳಗಾಗಿದ್ದರೆ ಅದರಿಂದ ನಿಮ್ಮ ಗಣಕಕ್ಕೂ ಈ autorun ನಿಂದ ವೈರಸ್ ಗಳು entry ಕೊಡಬಹುದು. ಮುಖ್ಯವಾಗಿ autorun .inf file ಗಳಿಂದ ಈ ವೈರಸ್ ಗಳು ಹಬ್ಬುತ್ತವೆ.ಈ ಸಮಸ್ಯೆಯನ್ನು ತಡೆಯಲು ಹಲವಾರು ತಂತ್ರಾಂಶಗಳಿವೆ

.autorun eater ಈ ತಂತ್ರಾಂಶದ ಮೂಲಕ autorun ನಿಂದ ವೈರಸ್ ಹರಡದಂತೆ ತಡೆಯಬಹುದು
*autorun eater ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ಈ ಸಮಸ್ಯೆಗೆ ಇರುವ ಇನ್ನೊಂದು ಉತ್ತಮ ತಂತ್ರಾಶ panda USB vaccine.ಈ ತಂತ್ರಾಶವು ನಿಮ್ಮ external drive ಗಳಿಗೆ ಚುಚ್ಚುಮದ್ದು ನೀಡುವ ಮೂಲಕ ವೈರಸ್ ಒಂದು ಗಣಕದಿಂದ ಇನ್ನೊಂದು ಗಣಕಕ್ಕೆ ಹರಡದಂತೆ ತಡೆಯುತ್ತದೆ.ಇಷ್ಟೇ ಅಲ್ಲದೆ ಇದು ನಿಮ್ಮ ಇಡೀ ಗಣಕಕ್ಕೆ ಚುಚ್ಚುಮದ್ದು ನೀಡುವ ಮೂಲಕ external drives ನಿಂದ ವೈರಸ್ ಹರಡುವುದನ್ನು ತಡೆಯುತ್ತದೆ
*panda USB vaccine ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Tuesday, March 22, 2011

ಚಾಟಿಂಗ್

ಸಾಮಾನ್ಯವಾಗಿ ಗೆಳೆಯರ ಜೊತೆ ನಾವು ನಮ್ಮ Social Networking ಸೈಟ್ ನಲ್ಲಿ ಚಾಟಿಂಗ್ ಮಾಡುತ್ತೇವೆ.ಚಾಟ್ ಮಾಡಲು ನಮ್ಮ ಬ್ರೌಸರ್ ನಲ್ಲಿ ನಮ್ಮ ಅಕೌಂಟ್ ಗಳಿಗೆ ಲಾಗಿನ್ ಆಗಲೇ ಬೇಕು.ಬೇರೆ ಬೇರೆ Social Site ನಲ್ಲಿ separate ಆಗಿ ಲಾಗಿನ್ ಆಗಿ ಚಾಟ್ ಮಾಡಲು ಸ್ವಲ್ಪ ಕಷ್ಟವಾಗಬಹುದು.ಇದನ್ನು ತಪ್ಪಿಸಲು ಇರುವ ತಂತ್ರಾಶಗಳೇ desktop chating clients .ಇವುಗಳನ್ನು ಡೌನ್ಲೋಡ್ ಮಾಡಿ ನಿಮ್ಮ ಗಣಕದಲ್ಲಿ install ಮಾಡಿಕೊಂಡು ನಿಮ್ಮ ಬೇರೆ ಬೇರೆ social ಸೈಟ್ ಗಳ ಖಾತೆ ಯನ್ನು ಇದರಲ್ಲಿ add ಮಾಡಿ ಆರಾಮವಾಗಿ ಗೆಳೆಯರ ಜೊತೆ ಚಾಟ್ ಮಾಡಬಹುದು

.ನೀವು gmail ಖಾತೆ ಹೊಂದಿರುವಿರಾದಲ್ಲಿ ನಿಮಗೆ ಉಪಯುಕ್ತ ಚಾಟ್ ತಂತ್ರಾಶ ಗೂಗಲ್ ಟಾಕ್ .ಈ ತಂತ್ರಾಂಶ ಬಳಸಿ ನಿಮ್ಮ gmail ಹಾಗು orkut ಸ್ನೇಹಿತರ ಜೊತೆ ಚಾಟ್ ಮಾಡಬಹುದು.call ಮಾಡುವ ಸವಲತ್ತು ಕೂಡ ಇದರಲ್ಲಿದೆ.ಹಾಗು data ಕೂಡ ವಿನಿಮಯ ಮಾಡಿಕೊಳ್ಳಬಹುದು
*ಗೂಗಲ್ ಟಾಕ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ಕೇವಲ gmail ಅಲ್ಲದೆ ಇತರ social networking ಸೈಟ್ ನಲ್ಲಿ ಇರುವ ನಿಮ್ಮ ಸ್ನೇಹಿತರ ಜೊತೆ ಚಾಟ್ ಮಾಡಲು ಅನುವು ಮಾಡಿಕೊಡುವ ತಂತ್ರಾಶ NIMBUZZ .ಕಾಲ್ ಹಾಗು file exchange ಸವಲತ್ತು ಇದರಲ್ಲಿದೆ
*NIMBUZZ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Sunday, March 20, 2011

ಸಿ.ಡಿ/ ಡಿ.ವಿ.ಡಿ writer ತಂತ್ರಾಂಶ

ನಿಮ್ಮ ಗಣಕದಲ್ಲಿರುವ ಉಪಯುಕ್ತ ಮಾಹಿತಿಗಳನ್ನು ಸಿ.ಡಿ/ ಡಿ.ವಿ.ಡಿ ಗಳಲ್ಲಿ ಕಾಪಿಡಲು ಇರುವ ಕೆಲವು ಉತ್ತಮ ತಂತ್ರಾಂಶಗಳ ಮಾಹಿತಿ.
Nero Burning ROM ಬಹಳಷ್ಟು ಜನರು ಉಪಯೋಗಿಸುತ್ತಿರುವ ತಂತ್ರಾಂಶವಾಗಿದ್ದು, Nero 10 ಗಣಕದಲ್ಲಿ ಕನಿಷ್ಠ 1.5 GB ಸ್ಪೇಸ್ ಅನ್ನು ಇದು ಉಪಯೋಗಿಸುತ್ತದೆ.
*Nero ತಂತ್ರಾಂಶದ 15 ದಿನಗಳ trial version ಡೌನ್-ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
Ashampoo Burning Studio 6 ಉಚಿತ ಮತ್ತು ಉತ್ತಮ ತಂತ್ರಾಂಶವಾಗಿದ್ದು, ಕೇವಲ 30 MB ಸ್ಪೇಸ್ ಅನ್ನು ಇದು ಉಪಯೋಗಿಸುತ್ತದೆ ಹಾಗು Nero ನೀಡುವ ಹಲವಾರು ಸೇವೆಗಳನ್ನು ಇದು ಒದಗಿಸುತ್ತದೆ.
*Ashampoo Burning Studio 6 ಡೌನ್-ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Thursday, March 17, 2011

ಇಮೇಜ್ Viewer

.ನಿಮ್ಮ ಗಣಕದಲ್ಲಿರುವ ಇಮೇಜ್ ಗಳನ್ನು ವೀಕ್ಷಿಸಲು ಇರುವ ಕೆಲವು ಉತ್ತಮ ತಂತ್ರಾಂಶಗಳ ಮಾಹಿತಿ
.ಹಲವಾರು ಜನ ತಮ್ಮ windows ಗಣಕದಲ್ಲಿ ಇಮೇಜ್ ಗಳನ್ನು ವೀಕ್ಷಿಸಲು windows picture viewer ಅನ್ನೇ ಹೆಚ್ಚಾಗಿ ಬಳಸುತ್ತಾರೆ .ಇದಕ್ಕಿಂತಲೂ ಇಮೇಜ್ ಗಳನ್ನು ವೀಕ್ಷಿಸಲು ಇರುವ ಉತ್ತಮ ತಂತ್ರಾಂಶವೇ picasa .ಇದರಲ್ಲಿ ಇಮೇಜ್ ಗಳನ್ನು edit ಕೂಡ ಮಾಡಬಹುದು
*picasa ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ಇಮೇಜ್ ಗಳನ್ನು ವೀಕ್ಷಿಸಲು ಇರುವ ಇನ್ನೊಂದು ಉತ್ತಮ ತಂತ್ರಾಂಶ Faststone Image viewer
*Faststone Image viewer ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Tuesday, March 15, 2011

ಸಿಸ್ಟಮ್ ಮಾಹಿತಿ

.ನಿಮ್ಮ ಗಣಕದ ಬಗ್ಗೆ ನಿಮಗೆ ಎಷ್ಟು ಮಾಹಿತಿ ಗೊತ್ತು? ಹಲವಾರು ಜನರಿಗೆ ತಮ್ಮ ಗಣಕದ Configaration ಬಗ್ಗೆ ಅವರಿಗೇ ಗೊತ್ತಿರುವುದಿಲ್ಲ .ಇನ್ನು ಕೆಲವರಿಗೆ ಅಲ್ಪ ಸ್ವಲ್ಪ ಗೊತ್ತಿರುತ್ತದೆ.ನಿಮ್ಮ ಗಣಕದ ಸಂಪೂರ್ಣ ವಿವರ (cpu ram,mother ಬೋರ್ಡ್,ಹಾರ್ಡ್ ಡಿಸ್ಕ್ ,etc)ಗಳನ್ನು ನೀಡುವ ಕೆಲವು ತಂತ್ರಾಂಶಗಳಿವೆ
.ಇಂತಹ ತಂತ್ರಾಶಗಳಲ್ಲಿ ಉತ್ತಮವಾದದ್ದು Speccy.ಇದು ನಿಮ್ಮ ಗಣಕದ ಸಂಪೂರ್ಣ ವಿವರವನ್ನು ನೀಡುತ್ತದೆ
*Speecy ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ಗಣಕದ ಮಾಹಿತಿ ನೀಡುವ ಇನ್ನೊಂದು ತಂತ್ರಾಂಶ SysSpec
*SysSpec ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Monday, March 14, 2011

DICTIONARY

ಈ ಮೊದಲ ಪೋಸ್ಟ್ ನಲ್ಲಿ ತಿಳಿಸಿದಂತೆ ಗೂಗಲ್ ನ ಹಲವಾರು ಉಪಯುಕ್ತ ಸೈಟ್ ಗಳಲ್ಲಿ Google Dictionary ಕೂಡ ಒಂದು.ಇನ್ನೊಂದು ಇದರಲ್ಲಿನ ಉತ್ತಮ ಅಂಶ ಎಂದರೆ ಇಂಗ್ಲಿಷ್ ಟು ಕನ್ನಡ Option ಇದರಲ್ಲಿದೆ.Google Dictionary ಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾಷಾಂತರ ಮಾಡಿ

ಸರ್ಚ್ ಇಂಜಿನ್ ದೈತ್ಯ ಗೂಗಲ್ ಇಂದು ಕೇವಲ ಸರ್ಚ್ ಇಂಜಿನ್ ಗೆ ಮಾತ್ರ ಸೀಮಿತವಾಗಿಲ್ಲ .ಹಲವಾರು ಉಪಯುಕ್ತವಾದ ತಂತ್ರಾಶಗಳನ್ನು ಗೂಗಲ್ ಇಂದು ಜನರಿಗೆ ನೀಡುತ್ತಿದೆ.ಇದರಲ್ಲಿ ಒಂದು Google Translate .ಗೂಗಲ್ Translate ನಲ್ಲಿ ಹಲವಾರು ಭಾಷೆಗಳ Translate ಲಭ್ಯವಿದೆ.ಅಂತರ್ಜಾಲದಲ್ಲಿ ಭಾಷೆ ಸಮಸ್ಯೆ ಇರುವವರಿಗೆ ಇದು ಖಂಡಿತ ಉಪಯುಕ್ತ ಸೈಟ್ .Google Translate ಗಾಗಿ ಇಲ್ಲಿ ಕ್ಲಿಕ್ ಮಾಡಿ

Sunday, March 13, 2011

ಎಲ್ಲೆಲ್ಲಿ ಏನೇನು??

ಇದೇ ಮಾರ್ಚ್ 11 ರಂದು ಜಪಾನ್ ನಲ್ಲಿ ಭೀಕರ ಭೂಕಂಪ ಹಾಗು ಸುನಾಮಿ ಸಂಭವಿಸಿ ಸಾವಿರಾರು ಜನರು ಪ್ರಾಣ ತೆತ್ತರು .ಪ್ರಪಂಚದಲ್ಲಿ ದಿನಾಲೂ ಕೂಡ ಒಂದಿಲ್ಲೊಂದು ಸಣ್ಣ ಪುಟ್ಟ ಪ್ರಕೃತಿ ವಿಕೋಪಗಳು ಸಂಭವಿಸುತ್ತಿರುತ್ತವೆ.ಹೀಗೆ ಪ್ರಕೃತಿ ವಿಕೋಪ ಎಲ್ಲಿ ಸಂಭವಿಸಿದೆ?,ಸಾವು ನೋವು ಎಷ್ಟಿದೆ? ಈ ಎಲ್ಲಾ ವಿವರಗಳನ್ನು ಘಟನೆ ನಡೆದ ತಕ್ಷಣ Update ಮಾಡುವ ಜಾಲತಾಣ ಒಂದಿದೆ.ಇಲ್ಲಿ ಕೇವಲ ಪ್ರಾಕೃತಿಕ ವಿಕೊಪವಲ್ಲದೆ ರಸ್ತೆ ಅಪಘಾತ ಗಳನ್ನೂ update ಮಾಡಿರುತ್ತಾರೆ,ಈ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

Thursday, March 10, 2011

ಗಣಕದ ವೇಗ ಹೆಚ್ಚಿಸಿ

ನಿಮ್ಮ ಗಣಕ ಸ್ಲೋ ಆಗಿದೆಯಾ? ಗಣಕ ಸ್ಲೋ ಆಗಲು ಹಲವಾರು ಕಾರಣಗಳಿವೆ.ಅವುಗಳಲ್ಲಿ ಬೇಡದ ಫೈಲ್ಸ್ ಗಳಿಂದಲೂ ಕೆಲವೊಮ್ಮೆ ಗಣಕ ಸ್ಲೋ ಆಗುತ್ತದೆ.ಇಂತಹ os ಇರುವ ಡ್ರೈವ್ ನಲ್ಲಿ ಬೇಡದ ಫೈಲ್ಸ್ ತೆಗೆಯಲು ಇರುವ ಉತ್ತಮ ತಂತ್ರಾಶ c cleanar .temporary files ತೆಗೆಯುವುದರ ಜೊತೆಗೆ,registry ಯಲ್ಲಿ ಇರುವ issue ಗಳನ್ನು ಇದು ಸರಿ ಮಾಡುತ್ತದೆ.programe ಗಳನ್ನು uninstall ಕೂಡ ಮಾಡಬಹುದು
*c cleaner ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ನಿಮ್ಮ ಗಣಕ ಸ್ಲೋ ಆಗಲು ಇನ್ನೊಂದು ಕಾರಣ os ಇರುವ ಡ್ರೈವ್ ನಲ್ಲಿ ಹಂಚಿ ಹರಿದು ಹೋಗಿರುವ ಫೈಲ್ಸ್ ಗಳು.ಈ ಹರಿದು ಹಂಚಿ ಹೋಗಿರುವ ಫೈಲ್ಸ್ ಗಳನ್ನು ಕ್ರಮಬದ್ದವಾಗಿಡಲು ಇರುವ ತಂತ್ರಾಶ defraggler .ಇದನ್ನು ಬಳಸಿ ನಿಮ್ಮ ಗಣಕದ ವೇಗವನ್ನು ಹೆಚ್ಚಿಸಕೊಳ್ಳಬಹುದು
*defragger ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Wednesday, March 9, 2011

anti-ವೈರಸ್

ಪ್ರತಿಯೊಂದು ಗಣಕಕ್ಕೂ ಅತ್ಯಂತ ಅವಶ್ಯಕತೆ ಇರುವ ತಂತ್ರಾಶವೇ anti-ವೈರಸ್.ಹೆಚ್ಚಿನ ಜನ ಹಣ ಕೊಟ್ಟು ಈ ತಂತ್ರಾಶ ಬಳಸುವುದಿಲ್ಲ .ಉಚಿತವಾಗಿ ಸಿಗುವ,ಹಾಗು ವೈರಸ್ ಗಳ ವಿರುದ್ದ ಹೋರಾಡುವ ಕೆಲವು ಉತ್ತಮ anti-ವೈರಸ್ ಗಳ ಮಾಹಿತಿ

.ಸದ್ಯಕ್ಕೆ ಉಚಿತವಾಗಿ ದೊರಕುವ ಅತ್ಯಂತ ಉತ್ತಮ anti-ವೈರಸ್ avast.spyware ಗಳ ವಿರುದ್ದ ಕೂಡ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.ಅಂತರ್ಜಾಲದಲ್ಲಿನ ವೈರಸ್ ಯುಕ್ತ ಜಾಲತಾಣದಿಂದ ನಿಮ್ಮ ಗಣಕಕ್ಕೆ ವೈರಸ್ ಹರಡದಂತೆ ತಡೆಯಬಲ್ಲ ತಂತ್ರಾಶ ಇದರಲ್ಲಿದೆ.ಒಟ್ಟಿನಲ್ಲಿ free antivirus ಬಳಸುವವರಿಗೆ avast ಒಂದು ಉತ್ತಮ antivirus.
*avast free antivirus ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ (ಒಂದು ವರ್ಷದ ವರೆಗೆ key ಇಲ್ಲದೆ register ಮಾಡಬಹುದು)

.genuine windows ಬಳಸುವವರಿಗೆ ಇರುವ ಉತ್ತಮ ಫ್ರೀ anti ವೈರಸ್ microsoft security essential.ಮೈಕ್ರೋಸಾಫ್ಟ್ ನವರ ಈ antivirus ನಿಮ್ಮ ಗಣಕಕ್ಕೆ ವೈರಸ್ ಗಳ ವಿರುದ್ದ ಅತ್ಯುತ್ತಮ ರಕ್ಷಣೆ ನೀಡುತ್ತದೆ
*microsoft security essential ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

.ಇನ್ನುಳಿದಂತೆ ಅಂತರ್ಜಾಲದಲ್ಲಿ ದೊರೆಕುವ ಉತ್ತಮ ಉಚಿತ antivirus ತಂತ್ರಾಶಗಳೆಂದರೆ avg ,panda cloud antivirus ,avira

Tuesday, March 8, 2011

ವಿಶ್ವ ಕಪ್ ಕ್ರಿಕೆಟ್

ಕ್ರಿಕೆಟ್ ಒಂದು ಧರ್ಮವಾಗಿರುವ ಭಾರತದಲ್ಲಿ ಈಗ ಎಲೆಲ್ಲೋ ಕ್ರಿಕೆಟ್ ಜ್ವರ.ಕ್ರಿಕೆಟ್ ಗೆ ಸಂಭಂದ ಪಟ್ಟ ಕೆಲವು Siteಗಳ ವಿವರಗಳು

.ಕ್ರಿಕೆಟ್ ಸ್ಕೋರ್ updates ಮಾಡುವ ಸಾವಿರಾರು ಸೈಟ್ ಗಳಿವೆ.ಅಂತಹವುಗಳಲ್ಲಿ ಬಾಲ್ ಟು ಬಾಲ್ update ನೀಡುವ ಸೈಟ್ espncricinfo.ಕ್ರಿಕೆಟ್ ಬಗ್ಗೆ,ನಡೆಯುತ್ತಿರುವ ಮಾಹಿತಿ ಮ್ಯಾಚ್ ಗಳ ಬಗ್ಗೆ ತಿಳಿಯಲು espncricinfo ಒಂದು ಬೆಸ್ಟ್ ಸೈಟ್

*ಇದೇ ತರಹದ ಕ್ರಿಕೆಟ್ score ಹಾಗು ಕ್ರಿಕೆಟ್ ನ ಎಲ್ಲ updates ನೀಡುವ ಇನ್ನೊಂದು ಉತ್ತಮ ಸೈಟ್ cricketnirvana.com

.ICC ಯವರ ವಿಶ್ವ ಕಪ್ ಕ್ರಿಕೆಟ್ ನ official website yahoo cricket .ಇಲ್ಲಿ ನೀವು ವಿಶ್ವ ಕಪ್ ಕ್ರಿಕೆಟ್ ಗಳ ಮಾಹಿತಿ ಜೊತೆಗೆ ಈ ಬಾರಿಯ ವಿಶ್ವ ಕಪ್ ಯಾವ ತಂಡ ಗೆಲುತ್ತದೆ ಎಂದು predict ಮಾಡಬಹುದು

.ನೀವು ಅಂತರ್ಜಾಲದಲ್ಲಿ ಲೈವ್ ಕ್ರಿಕೆಟ್ ನೋಡಬೇಕೆಂದರೆ ಉತ್ತಮ ಸೈಟ್ crictime

***ಜೈ ಹೋ
ಕ್ರಿಕೆಟ್***

Monday, March 7, 2011

ಬ್ರೌಸರ್ಸ್

-ನೆಟ್ ಬ್ರೌಸ್ ಮಾಡಲು ಇರುವ ಕೆಲವು ಅತ್ಯುತ್ತಮ ಬ್ರೌಸರ್ ಗಳ ಮಾಹಿತಿ-

1.Mozilla Firefox -Firefox ಒಂದು user friendly ಬ್ರೌಸರ್ . ಹಲವಾರು ಉಪಯುಕ್ತ add -on ಗಳನ್ನು firefox ನಲ್ಲಿ install ಮಾಡಲು ಸಾದ್ಯವಿರುವುದರಿಂದ Firefox ಒಂದು ಅತ್ಯುತ್ತಮ ಬ್ರೌಸರ್
*Firefox ನ ಹೊಸ ಆವೃತಿ-3.6.15 ಲಭ್ಯವಿದೆ.ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2.Google Chrome-ಗೂಗಲ್ ನವರ chrome ಕೂಡ ಒಂದು ಉತ್ತಮ ಬ್ರೌಸರ್.slow connection ಇಂಟರ್ನೆಟ್ ಹೊಂದಿರುವವರಿಗೆ ಈ ಬ್ರೌಸರ್ ತುಂಬಾ ಅನುಕೂಲಕರ
*Chrome ನ ಹೊಸ ಆವೃತಿ 11.0.686.3 ಲಭ್ಯವಿದೆ.ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3.OPERA-Trash can,Mouse gestures ಗಳಂತಹ ಸೌಲಭ್ಯಗಳನ್ನು ಒಳಗೊಂಡಿರುವ opera ಕೂಡ ಒಂದು user friendly ಬ್ರೌಸರ್
*Opera ದ ಹೊಸ ಆವೃತಿ 11 .01 ಲಭ್ಯವಿದೆ.ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ


ಇವುಗಳನ್ನು ಬಿಟ್ಟರೆ ಇನ್ನುಳಿದಂತೆ
Internet explorer ,safari ನೆಟ್ surf ಮಾಡಲು ಇರುವ ಉತ್ತಮ ಬ್ರೌಸರ್ಗಳು

Saturday, March 5, 2011

ನಮಸ್ಕಾರ.....

ಪ್ರಿಯ ಓದುಗ ಮಿತ್ರರೇ Welcome To RAGAT TECH PARADISE.ನನ್ನ ಪ್ರಕೃತಿಯ ಬ್ಲಾಗ್ ragat paradise ಜೊತೆಗೆ ಇದೀಗ ಹೊಸ tech ಬ್ಲಾಗ್ ತೆರೆದಿದ್ದೇನೆ

.ಒಂದು ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ನಿಮ್ಮ ಹತ್ತಿರ ಇದ್ದಾಗ  ನಿಮಗೆ ಕೆಲವು ಅತ್ಯವಶ್ಯಕವಾದ ತಂತ್ರಾಶಗಳ ಅವಶ್ಯಕತೆ ಇದ್ದೆ ಇರುತ್ತದೆ.ಇನ್ನು ಕೆಲವು ತಂತ್ರಾಶಗಳು ನಿಮಗೆ ಅವಶ್ಯಕವಲ್ಲದಿದ್ದರೂ ಉಪಯುಕ್ತವಾಗಿರುತ್ತವೆ.ನಾನೂ ಕೂಡ ಒಬ್ಬ ತಂತ್ರಾಂಶ  ಪ್ರಿಯ.ಹಲವಾರು ತಂತ್ರಾಂಶಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಲೇ ಇರುತ್ತೇನೆ.ಹೀಗೆ ನನ್ನ ಬಳಿ ಇರುವ ತಂತ್ರಾಂಶ ಮಾಹಿತಿಯನ್ನು ನಿಮ್ಮ ಬಳಿ ಹಂಚಿಕೊಳ್ಳಲು ಈ ಬ್ಲಾಗ್ ತೆರೆದಿದ್ದೇನೆ

.ನೀವು ಕೂಡ ನಿಮಗೆ ತಿಳಿದಿರುವ ಉತ್ತಮ ತಂತ್ರಾಶವನ್ನು ತಿಳಿಸಿದರೆ ನಾನು ಇಲ್ಲಿ publish ಮಾಡುತ್ತೇನೆ.ಒಟ್ಟಿನಲ್ಲಿ windows Pc ಗಳಿಗೆ ಈ ಬ್ಲಾಗ್ ನಲ್ಲಿ ಉತ್ತಮ ತಂತ್ರಾಶಗಳ ಮಾಹಿತಿ ಒದಗಿಸುವುದೇ ಈ ಬ್ಲಾಗ್ ನ ಗುರಿ.ನೀವು ಇದರಲ್ಲಿ ಕೈಜೋಡಿಸಿ,ಬ್ಲಾಗ್ ಬೆಳೆಸಲು ಸಹಕರಿಸಿ


ಇಂತಿ ನಿಮ್ಮ
ರಾಘು
RAGAT PARADISE