Tuesday, October 4, 2011

ImgBurn

CD,DVD ಗಳ ಇಮೇಜ್ ಕಾಫಿ , ರೈಟ್ ಮಾಡಲು ಹೆಚ್ಚಿನ ಜನರು Nero ತಂತ್ರಾಂಶವನ್ನು ಉಪಯೋಗಿಸುತ್ತಾರೆ.ಇದು ನಿಮ್ಮ ಗಣಕದಲ್ಲಿ ಹೆಚ್ಚು ಜಾಗವನ್ನು ತೆಗೆದುಕೊಳ್ಳುತ್ತದೆ.ಈ ಸಮಸ್ಯೆಗೆ ಪರಿಹಾರ ImgBurn ತಂತ್ರಾಂಶ.CD,DVD ಗಳ ಇಮೇಜ್ ತೆಗೆದು ಕಾಫಿ ಹಾಗು ರೈಟ್ ಮಾಡಲು ಇದು ಅತ್ಯಂತ ಸುಲಭ ತಂತ್ರಾಂಶ

*ImgBurn ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಫೇಸ್ ಬುಕ್ ಖಾತೆ ರಕ್ಷಣೆ

ಇತ್ತೀಚಿಗೆ ಬಹಳ ಜನಪ್ರಿಯತೆ ಪಡೆದಿರುವ ಸಾಮಾಜಿಕ ತಾಣ ಫೇಸ್ ಬುಕ್ ನಲ್ಲಿ ಹಲವು ಲಿಂಕ್ ಗಳು ವೈರಸ್ ಪೂರಿತವಾಗಿರುತ್ತವೆ.ಕಿಡಿಗೇಡಿಗಳು ಕೆಲವು ಸಂದೇಶಗಳನ್ನು ಸೃಷ್ಟಿಸಿ ವೈರಸ್ ಯುಕ್ತ ಲಿಂಕ್ ಗಳನ್ನು ಸೇರಿಸಿ ಫೇಸ್ ಬುಕ್ ನಲ್ಲಿ ಹರಿಬಿಡುತ್ತಾರೆ.ಇಂತಹ ಲಿಂಕ್ ಗಳನ್ನು ನೀವು ಕ್ಲಿಕ್ ಮಾಡುವುದರಿಂದ ನಿಮ್ಮ ಫೇಸ್ ಬುಕ್ ಖಾತೆ ತೊಂದರೆಗೊಳಗಾಗಬಹುದು.ಇದನ್ನು ತಪ್ಪಿಸಲು ಇರುವ ಒಂದು ಉತ್ತಮ ಅಪ್ಲಿಕೇಶನ್ Bitdefender Safego .ಈ ಅಪ್ಲಿಕೇಶನ್ ಅನ್ನು ನಿಮ್ಮ ಫೇಸ್ ಬುಕ್ ಖಾತೆಗೆ ಅಳವಡಿಸಿಕೊಳ್ಳುವುದರಿಂದ ನಿಮ್ಮ ಫೇಸ್ ಬುಕ್ ಖಾತೆಯನ್ನು ವೈರಸ್ ಯುಕ್ತ ಲಿಂಕ್ ಗಳಿಂದ ಸಂರಕ್ಷಿಸಿಕೊಳ್ಳಬಹುದು.


*
Bitdefender Safego ಅಪ್ಲಿಕೇಶನ್ ಅನ್ನು ನಿಮ್ಮ ಖಾತೆಗೆ ಅಳವಡಿಸಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

Dictionary

ಇತ್ತೀಚಿಗಷ್ಟೆ ನಾವು Dictionary ಯ ಬಗ್ಗೆ ಒಂದು ಪೋಸ್ಟ್ ಪ್ರಕಟಿಸಿದ್ದೆವು .ನಿಮಗೆ ಸುಲಭವಾಗುವಂತಹ Dictionary ತಂತ್ರಾಶವೊಂದು ಅಂತರ್ಜಾಲದಲ್ಲಿ ಲಭ್ಯವಿದೆ.ಅದೇ WordWeb ತಂತ್ರಾಶ.ಇದು ಉಚಿತ ತಂತ್ರಾಶವಾಗಿದ್ದು ಇದನ್ನು ನಿಮ್ಮ ಗಣಕದಲ್ಲಿ ಅಳವಡಿಸಿಕೊಳ್ಳುವುದರಿಂದ ತುಂಬಾ ಪ್ರಯೋಜನವಾಗಬಹುದು

*WordWeb ಅನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ